ಒಂದು ಮೊಟ್ಟೆಯ ಕಥೆ ೨೦೧೭ರಲ್ಲಿ ತೆರೆಕಂಡ ಹಾಸ್ಯ ಪ್ರಧಾನ ಕನ್ನಡ ಚಲನಚಿತ್ರ. ರಾಜ್ ಬಿ ಶೆಟ್ಟಿಯವರು ನಿರ್ದೇಶಿಸಿರುವ ಈ ಚಿತ್ರದಲ್ಲಿ ಅವರೇ ನಾಯಕನಟರಾಗಿ ನಟಿಸಿದ್ದಾರೆ. ಉಷಾ ಬಂಡಾರಿ, ಅಮೃತ ನಾಯಕ್, ದೀಪಕ್ ರೈ ಪನಜೆ ಮತ್ತು ಶೈಲಾಶ್ರಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. == ತಾರಾಗಣ == ರಾಜ್ ಬಿ. ಶೆಟ್ಟಿ ಉಷಾ ಬಂಡಾರಿ ಶ್ರೇಯಾ ಅಂಚನ್ ಶೈಲಾಶ್ರಿ ಅಮೃತ ನಾಯ್ಕ್ ವಿಜೆ ವಿನೀತ್ ಮೈಮ್ ರಾಮದಾಸ್ ದೀಪಕ್ ರೈ ಪನಜೆ == ಚಿತ್ರ ಬಿಡುಗಡೆ == ಒಂದು ಮೊಟ್ಟೆಯ ಕಥೆ ಚಲನಚಿತ್ರವು ಮೇ ೨೦೧೭ರಲ್ಲಿ ನ್ಯೂಯಾರ್ಕ್ ಭಾರತೀಯ ಸಿನಿಮೋತ್ಸವದಲ್ಲಿ ಪ್ರದರ್ಶನ ಕಂಡಿತು. ಭಾರತದಲ್ಲಿ ಜುಲೈ ೬, ೨೦೧೭ರಂದು ಚಲನಚಿತ್ರವು ಬಿಡುಗಡೆಯಾಯಿತು. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಫೇಸ್ಬುಕ್‍ನಲ್ಲಿ ಒಂದು ಮೊಟ್ಟೆಯ ಕಥೆ